ಒಂದು ಹಾಡಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಒಂದು ಹಾಡಿನ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ವಿಷಯ ಅಡಗಿರುತ್ತದೆ. ಅದೇ ರೀತಿ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು..' ಹಾಡಿನ ಹಿಂದೆಯೂ ರೋಚಕ ಕಥೆ ಇದೆ. 'ಆಕಸ್ಮಿಕ' ಸಿನಿಮಾದ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು...' ಹಾಡು ಕನ್ನಡಿಗರ ಹೃದಯದಲ್ಲಿ ಸದಾ ಕಾಲ ಇರುವ ಹಾಡು. ಹಂಸಲೇಖ ಸಾಹಿತ್ಯ ಮತ್ತು ಸಂಗೀತದ ಶ್ರೇಷ್ಠತೆಯನ್ನು ಈ ಹಾಡು ಮತ್ತೆ ಸಾರಿ ಕೇಳಿತ್ತು.